1996 ರಲ್ಲಿ ಕವಿತಾ ರಚನೆ ಸ್ಪರ್ಧೆಗೆ ಜಯರಾಮ ನೆಟ್ಟಾರ್ ರವರ ರಚನೆ :)
ಕಟ್ಟದಿರು ಗೋಡೆಯನು ಅಭಿವೃದ್ಧಿ ಮುನ್ನಡೆಗೆ
ಮುಳ್ಳುಗಳನಿಡದಿರು ಭವಿಷ್ಯದ ಕನಸುಗಳಿಗೆ
ತರಬೇಡ ತಡೆಗಳನು ಜ್ಞಾನ ಸಂಪಾದನೆಗೆ
ಪ್ರಗತಿಗಳ ಹಾದಿಯಲಿ ಕಟ್ಟದಿರು ಗೋಡೆಯನು
ಶ್ರಮವಹಿಸಿ ಮುಂದುವರಿ ದೂರದಾ ಗುರಿಗಾಗಿ
ಮನಸಿಟ್ಟು ಅಭ್ಯಸಿಸು ತಿಳಿವೆಂಬ ಸಿರಿಗಾಗಿ
ಗಮನವಿಡು ವಿಷಯದಲಿ ಕಲಿತುಕೋ ಸರಿಯಾಗಿ
ಮುನ್ನಡೆಯ ದಾರಿಯಲಿ ಕಟ್ಟದಿರು ಗೋಡೆಯನು
ಆಗಾಗ ಸೋತರೂ ಮತ್ತೊಮ್ಮೆ ಯತ್ನಿಸು
ಕೊನೆಗೊಮ್ಮೆ ಗುರಿಮುಟ್ಟಿ ಸಾಮರ್ಥ್ಯ ತೋರಿಸು
ಹಬ್ಬಿರುವ ಕೀರ್ತಿಯನು ಇನ್ನಷ್ಟು ಬೆಳಗಿಸು
ವಿಕಾಸದ ಹಾದಿಯಲಿ ಕಟ್ಟದಿರು ಗೋಡೆಯನು
ವಿಜ್ಞಾನ, ಇತಿಹಾಸ, ಕ್ರೀಡೆಗಳು ಸೇರಿರಲಿ
ಭೂಗೋಳ, ಮುದ ಕೊಡುವ ಲೆಕ್ಕಗಳು ಗೊತ್ತಿರಲಿ
ಸಾಮಾನ್ಯ ಜ್ಞಾನವು, ಸಾಹಿತ್ಯ ಬೆಳಗಿರಲಿ
ಅಭಿವೃದ್ಧಿ ಪಥದಲ್ಲಿ ಕಟ್ಟದಿರು ಗೋಡೆಯನು
ಕಟ್ಟದಿರು ಗೋಡೆಯನು ಅಭಿವೃದ್ಧಿ ಮುನ್ನಡೆಗೆ
ಮುಳ್ಳುಗಳನಿಡದಿರು ಭವಿಷ್ಯದ ಕನಸುಗಳಿಗೆ
ತರಬೇಡ ತಡೆಗಳನು ಜ್ಞಾನ ಸಂಪಾದನೆಗೆ
ಪ್ರಗತಿಗಳ ಹಾದಿಯಲಿ ಕಟ್ಟದಿರು ಗೋಡೆಯನು
ಶ್ರಮವಹಿಸಿ ಮುಂದುವರಿ ದೂರದಾ ಗುರಿಗಾಗಿ
ಮನಸಿಟ್ಟು ಅಭ್ಯಸಿಸು ತಿಳಿವೆಂಬ ಸಿರಿಗಾಗಿ
ಗಮನವಿಡು ವಿಷಯದಲಿ ಕಲಿತುಕೋ ಸರಿಯಾಗಿ
ಮುನ್ನಡೆಯ ದಾರಿಯಲಿ ಕಟ್ಟದಿರು ಗೋಡೆಯನು
ಆಗಾಗ ಸೋತರೂ ಮತ್ತೊಮ್ಮೆ ಯತ್ನಿಸು
ಕೊನೆಗೊಮ್ಮೆ ಗುರಿಮುಟ್ಟಿ ಸಾಮರ್ಥ್ಯ ತೋರಿಸು
ಹಬ್ಬಿರುವ ಕೀರ್ತಿಯನು ಇನ್ನಷ್ಟು ಬೆಳಗಿಸು
ವಿಕಾಸದ ಹಾದಿಯಲಿ ಕಟ್ಟದಿರು ಗೋಡೆಯನು
ವಿಜ್ಞಾನ, ಇತಿಹಾಸ, ಕ್ರೀಡೆಗಳು ಸೇರಿರಲಿ
ಭೂಗೋಳ, ಮುದ ಕೊಡುವ ಲೆಕ್ಕಗಳು ಗೊತ್ತಿರಲಿ
ಸಾಮಾನ್ಯ ಜ್ಞಾನವು, ಸಾಹಿತ್ಯ ಬೆಳಗಿರಲಿ
ಅಭಿವೃದ್ಧಿ ಪಥದಲ್ಲಿ ಕಟ್ಟದಿರು ಗೋಡೆಯನು
Oh! Idu enige marthu hogitthu, eega nempaathu
ReplyDelete