1996 ರ , 9 ನೇ ತರಗತಿಯ ರಚನೆಗಳು
* ಲಾಡು
ಲಾಡು ಲಾಡು
ಲಾಡನು ನೋಡು
ಹೊಟ್ಟೆಯ ಪಾಡು
ಆಸೆಯ ಗೂಡು
ದಯೆಯನು ಮಾಡು
ಕೊಡು ನನಗೆರಡು
* ಸಾಟು
ಸಾಟು ಸಾಟು
ಉತ್ತಮ ಸ್ವೀಟು
ಇದು ಬರಿ ಕಾಟು
ಎಂದವರಿಗೆ ಏಟು
ಬಿಡುತ್ತ ಲಾಟು
ತಿನ್ನಬೇಕು ಸಾಟು
* ಮೈಸೂರು ಪಾಕು
ಮೈಸೂರು ಪಾಕು
ತಿಂದರೆ ಬೇಕು
ಇಲ್ಲವು ಸಾಕು
ತಿನ್ನುವುದೇ ಜೋಕು
* ಹೋಳಿಗೆ
ಹೋಳಿಗೆ ಹೋಳಿಗೆ
ಕೆಲಸವು ಆಳಿಗೆ
ಬಡಿಸುದು ಬಾಳೆಗೆ
ಉಳಿವುದು ನಾಳೆಗೆ
ತು೦ಬುದು ಹೋಳಿಗೆ
ಅತಿಥಿಗಳ ಜೋಳಿಗೆ
No comments:
Post a Comment