Wednesday, February 20, 2013

ಬದುಕು


16/07/1997 ರ ರಚನೆ 


    ಉದಯ ಕಾಲದಿ ಪೂರ್ವ 
    ಆಗಸದಿ ತೋರುವನು 
    ಕೆ೦ಬಣ್ಣದಾದಿತ್ಯ ಹಣ್ಣಿನಂತೇ  
                         
                         ಚೆಲುಮುಖದಿ ನಗುವರಳಿ 
                         ಪುತ್ಥಳಿಯ ತೆರನಾದ 
                         ಎಳೆಯ ಪ್ರಾಯದ ಮುಗ್ಧ ಮಗುವಿನಂತೇ


   ಸುಡು ಬಿಸಿಲ ಮಧ್ಯಾಹ್ನ
   ನೆತ್ತಿ ಮೇಲೆತ್ತಿದರೆ
   ಹೊಳೆಯುತಿರುವ ರವಿಯು ಕೆಂಡದಂತೇ

                         ಶಕ್ತಿ ಬಿಸಿರಕ್ತಗಳ
                         ಧೈರ್ಯ ಉತ್ಸಾಹಗಳ
                         ಚಿಲುಮೆಪುಟಿದೇಳುವ ಯುವಕರಂತೇ


ಹೊತ್ತು ಮುಳುಗುವ ಹೊತ್ತು
ಪಡುವಣದಿ ನಡೆಯುವನು
ಭಾನು ಬಾನಿನ ತುದಿಗೆ ಉರುಳಿದಂತೇ


                         ಜೀವಿತವ ಬೆಳಗಿಸುತ
                         ವರುಷಗಳ ಉರುಳಿಸುತ
                         ಬದುಕಿನ೦ಚನು ಹಿಡಿದ ವೃದ್ಧನ೦ತೇ

                             



Thursday, February 14, 2013

ಗೋಡೆ

1996 ರಲ್ಲಿ ಕವಿತಾ ರಚನೆ ಸ್ಪರ್ಧೆಗೆ ಜಯರಾಮ ನೆಟ್ಟಾರ್ ರವರ ರಚನೆ  :)


ಕಟ್ಟದಿರು ಗೋಡೆಯನು ಅಭಿವೃದ್ಧಿ ಮುನ್ನಡೆಗೆ
ಮುಳ್ಳುಗಳನಿಡದಿರು  ಭವಿಷ್ಯದ ಕನಸುಗಳಿಗೆ
ತರಬೇಡ ತಡೆಗಳನು ಜ್ಞಾನ ಸಂಪಾದನೆಗೆ
ಪ್ರಗತಿಗಳ ಹಾದಿಯಲಿ ಕಟ್ಟದಿರು ಗೋಡೆಯನು

ಶ್ರಮವಹಿಸಿ ಮುಂದುವರಿ ದೂರದಾ ಗುರಿಗಾಗಿ
ಮನಸಿಟ್ಟು ಅಭ್ಯಸಿಸು ತಿಳಿವೆಂಬ ಸಿರಿಗಾಗಿ
ಗಮನವಿಡು ವಿಷಯದಲಿ ಕಲಿತುಕೋ ಸರಿಯಾಗಿ
ಮುನ್ನಡೆಯ ದಾರಿಯಲಿ ಕಟ್ಟದಿರು ಗೋಡೆಯನು

ಆಗಾಗ ಸೋತರೂ ಮತ್ತೊಮ್ಮೆ ಯತ್ನಿಸು
ಕೊನೆಗೊಮ್ಮೆ ಗುರಿಮುಟ್ಟಿ ಸಾಮರ್ಥ್ಯ ತೋರಿಸು
ಹಬ್ಬಿರುವ ಕೀರ್ತಿಯನು ಇನ್ನಷ್ಟು ಬೆಳಗಿಸು
ವಿಕಾಸದ ಹಾದಿಯಲಿ  ಕಟ್ಟದಿರು ಗೋಡೆಯನು

ವಿಜ್ಞಾನ, ಇತಿಹಾಸ, ಕ್ರೀಡೆಗಳು ಸೇರಿರಲಿ
ಭೂಗೋಳ, ಮುದ ಕೊಡುವ  ಲೆಕ್ಕಗಳು ಗೊತ್ತಿರಲಿ
ಸಾಮಾನ್ಯ ಜ್ಞಾನವು, ಸಾಹಿತ್ಯ ಬೆಳಗಿರಲಿ
ಅಭಿವೃದ್ಧಿ ಪಥದಲ್ಲಿ ಕಟ್ಟದಿರು ಗೋಡೆಯನು

    

Wednesday, February 13, 2013

ಖ್ಯಾತ ಕವಿ ಶ್ರೀ ಜಯರಾಮ ನೆಟ್ಟಾರ್ ಆವರ ರಚನೆಗಳು


1996 ರ ,  9 ನೇ ತರಗತಿಯ ರಚನೆಗಳು

* ಲಾಡು

 ಲಾಡು ಲಾಡು
 ಲಾಡನು  ನೋಡು
 ಹೊಟ್ಟೆಯ  ಪಾಡು
 ಆಸೆಯ  ಗೂಡು
 ದಯೆಯನು ಮಾಡು
 ಕೊಡು ನನಗೆರಡು

*  ಸಾಟು

 ಸಾಟು ಸಾಟು
 ಉತ್ತಮ ಸ್ವೀಟು
 ಇದು ಬರಿ ಕಾಟು
 ಎಂದವರಿಗೆ ಏಟು
 ಬಿಡುತ್ತ ಲಾಟು
 ತಿನ್ನಬೇಕು ಸಾಟು

* ಮೈಸೂರು ಪಾಕು 

 ಮೈಸೂರು ಪಾಕು
 ತಿಂದರೆ ಬೇಕು
 ಇಲ್ಲವು ಸಾಕು
 ತಿನ್ನುವುದೇ  ಜೋಕು

* ಹೋಳಿಗೆ

 ಹೋಳಿಗೆ ಹೋಳಿಗೆ
 ಕೆಲಸವು ಆಳಿಗೆ
 ಬಡಿಸುದು ಬಾಳೆಗೆ
 ಉಳಿವುದು ನಾಳೆಗೆ
 ತು೦ಬುದು ಹೋಳಿಗೆ
 ಅತಿಥಿಗಳ ಜೋಳಿಗೆ