16/07/1997 ರ ರಚನೆ
ಉದಯ ಕಾಲದಿ ಪೂರ್ವ
ಆಗಸದಿ ತೋರುವನು
ಕೆ೦ಬಣ್ಣದಾದಿತ್ಯ ಹಣ್ಣಿನಂತೇ
ಚೆಲುಮುಖದಿ ನಗುವರಳಿ
ಪುತ್ಥಳಿಯ ತೆರನಾದ
ಎಳೆಯ ಪ್ರಾಯದ ಮುಗ್ಧ ಮಗುವಿನಂತೇ
ಸುಡು ಬಿಸಿಲ ಮಧ್ಯಾಹ್ನ
ನೆತ್ತಿ ಮೇಲೆತ್ತಿದರೆ
ಹೊಳೆಯುತಿರುವ ರವಿಯು ಕೆಂಡದಂತೇ
ಶಕ್ತಿ ಬಿಸಿರಕ್ತಗಳ
ಧೈರ್ಯ ಉತ್ಸಾಹಗಳ
ಚಿಲುಮೆಪುಟಿದೇಳುವ ಯುವಕರಂತೇ
ಹೊತ್ತು ಮುಳುಗುವ ಹೊತ್ತು
ಪಡುವಣದಿ ನಡೆಯುವನು
ಭಾನು ಬಾನಿನ ತುದಿಗೆ ಉರುಳಿದಂತೇ
ಜೀವಿತವ ಬೆಳಗಿಸುತ
ವರುಷಗಳ ಉರುಳಿಸುತ
ಬದುಕಿನ೦ಚನು ಹಿಡಿದ ವೃದ್ಧನ೦ತೇ
ಸುಡು ಬಿಸಿಲ ಮಧ್ಯಾಹ್ನ
ನೆತ್ತಿ ಮೇಲೆತ್ತಿದರೆ
ಹೊಳೆಯುತಿರುವ ರವಿಯು ಕೆಂಡದಂತೇ
ಶಕ್ತಿ ಬಿಸಿರಕ್ತಗಳ
ಧೈರ್ಯ ಉತ್ಸಾಹಗಳ
ಚಿಲುಮೆಪುಟಿದೇಳುವ ಯುವಕರಂತೇ
ಹೊತ್ತು ಮುಳುಗುವ ಹೊತ್ತು
ಪಡುವಣದಿ ನಡೆಯುವನು
ಭಾನು ಬಾನಿನ ತುದಿಗೆ ಉರುಳಿದಂತೇ
ಜೀವಿತವ ಬೆಳಗಿಸುತ
ವರುಷಗಳ ಉರುಳಿಸುತ
ಬದುಕಿನ೦ಚನು ಹಿಡಿದ ವೃದ್ಧನ೦ತೇ